2028ರ ಶಿರಹಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಐ. ಎಸ್‌. ಪೂಜಾರಿ ಬಿಜೆಪಿ ಅಭ್ಯರ್ಥಿಯಾದರೆ ಗೆಲುವು ಖಚಿತ: ನಿಂಗಪ್ಪ ಪ್ಯಾಟಿ

    ಜೆ. ಜಿ. ಇಂಟರ್ನ್ಯಾಷನಲ್ ಸ್ಕೂಲ್ ಮೂಲಕ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ, ಬಡಮಕ್ಕಳಿಗೆ ರಿಯಾಯ್ತಿ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.

ಸ್ನೇಹಜೀವಿ ನ್ಯೂಸ್

ಗದಗ ಜಿಲ್ಲೆಯ ಶಿರಹಟ್ಟಿ ಮೀಸಲು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ 80 ಹಳ್ಳಿಗಳ ಸರ್ವ ಸಮುದಾಯದ ಜನಾಂಗದವರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಿರುವ ಬಿಜೆಪಿ ಮುಖಂಡರಾದ ಆಯ ಎಸ್’ ಪೂಜಾರ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ನೀಡಿದರೆ ಗೆಲ್ಲಿಸುವ ನಿರ್ದಾರವನ್ನು ಕ್ಷೇತ್ರದ ಜನತೆ ಮಾಡಿದೆ ಎಂದು ನಿಂಗಪ್ಪ ಪ್ಯಾಟಿ ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ. ಅವರು ಪತ್ರಿಕೆಗೆ ಹೇಳಿಕೆ ನೀಡಿ ಆಯ್ ಎಸ್ ಪೂಜಾರ ಅವರು ಸೇವಾಲಾಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ, ಸಹಾಯ್ ಕೇಳಿ ಬಂದವರು ಎಂದು ಬರಿಗೈಯಲ್ಲಿ ಹಿಂತಿರುಗಿಲ್ಲಾ ದೇಶ ಸೇವೆಯಲ್ಲಿ ತೊಡಗಿರುವ ಶತಮಾನದ ಇತಿಹಾಸವುಳ್ಳ ಆರ್‌ಎಸ್‌ಎಸ್‌ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಕಟ್ಟುವ ದೇಶ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಆರ್. ಎಸ್. ಎಸ್ ಪ್ರಮುಖರೊಂದಿಗೆ ಉತ್ತಮ ಒಡನಾಟ ಹೊಂದಿರುವ ಸಂಘದ ಸಕ್ರಿಯ ಕಾರ್ಯಕರ್ತನಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಜನರ ಸೇವೆ ಮಾಡಿ ಅವರ ಅಪೇಕ್ಷೆಯಂತೆ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ ಜನಸೇವೆಯ ತುಡಿತಕ್ಕಾಗಿ ರಾಜಕೀಯ ಕ್ಷೇತ್ರ ಅಯ್ದುಕೊಂಡಿದ್ದಾರೆ.

ಜೆ. ಜಿ. ಇಂಟರ್ನ್ಯಾಷನಲ್ ಸ್ಕೂಲ್ ಮೂಲಕ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ, ಬಡಮಕ್ಕಳಿಗೆ ರಿಯಾಯ್ತಿ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಇಂತಹ ಸೇವಕರ ಅವಶ್ಯಕತೆ ಕ್ಷೇತ್ರಕ್ಕಿದೆ. ಅವರನ್ನೇ ಶಾಸಕರನ್ನಾಗಿ ಮಾಡಬೇಕು ಎನ್ನುವದು ಈ ಭಾಗದ ಜನರ ಬಯಕೆ ಆಗಿದ್ದು, ಆರ್ ಎಸ್ ಎಸ್ ಪ್ರಮುಖರು ಹಾಗೂ ಬಿಜೆಪಿ ಪ್ರಮುಖರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆಯ ಸಂದರ್ಭದಲ್ಲಿ ಅವರಿಗೆ ಆದ್ಯತೆ ನೀಡಬೇಕು, ಬೇರೆ ವ್ಯಕ್ತಿ ಆದಲ್ಲಿ ಅವರನ್ನು ಸೋಲಿಸುವದು ನಮ್ಮ ಕರ್ತವ್ಯ ಆಗಲಿದೆ. ಅಯ್ ಎಸ್ ಪೂಜಾರ ಅಭ್ಯರ್ಥಿ ಆದರೆ ಗೆಲುವು ಖಚಿತ, ಬೇರೆ ಯಾರೇ ಅಭ್ಯರ್ಥಿಯಾದರೆ ಸೋಲು ಖಚಿತ, ಗೆಲುವು ಬೇಕೆ ಸೋಲು ಬೇಕೆ ಬಿಜೆಪಿ ಹೈಕಮಾಂಡ ನಿರ್ಧರಿಸಬೇಕಿದೆ.

ವಾಲ್ಮೀಕಿ ಹಗರಣ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಜಿಲ್ಲೆಯಿಂದ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ. ಐ. ಎಸ್ ಪೂಜಾರ ಲಂಬಾಣಿ ಜನಾಂಗಕ್ಕೆ ಸೇರಿದ್ದರು, ತಮ್ಮ ಸಮಾಜದ ಜೊತೆಗೆ ಇತರೆ ಸಮಾಜ ಭಾಂದವರ ಜೊತೆಗೆ ಉತ್ತಮ ಬಾಂಧವ್ಯ ಬೆಸೆದುಕೊಂಡಿದ್ದಾರೆ. ಹಿರಿಯರು ಕಿರಿಯರು ಎನ್ನದೆ ಎಲ್ಲರನ್ನು ಪ್ರೀತಿ ಗೌರವದೊಂದಿಗೆ ತಮ್ಮ ಪರಿವಾರದ ಸದಸ್ಯರಂತೆ ಕಾಣುತ್ತಾರೆ. ಅಂತಹ ಯುವಕನ ಸೇವೆ ಮತ್ತು ಪ್ರೀತಿ ಅವಶ್ಯಕತೆ ನಮಗಿದ್ದು, ಅವರಿಗೆ 2028ರ ವಿಧಾನಸಭೆಯ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಅವರಿಗೆ ನೀಡಬೇಕು ಅವರನ್ನು ಗೆಲ್ಲಿಸುವ ಜವಾಬ್ದಾರಿ ಕ್ಷೇತ್ರದ ಜನತೆಯದ್ದಾಗಿದೆ ನಿಂಗಪ್ಪ ಪ್ಯಾಟಿ ಸೇರಿದಂತೆ ಶಿರಹಟ್ಟಿ ಕ್ಷೇತ್ರದ ಜನತೆಯ ಆಶಯವಾಗಿದೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button