ಪೊಲೀಸ್ ಠಾಣೆಯಲ್ಲೇ ಚುಂಬನ ಪ್ರಕರಣ: ಪುರುಷ ಕಾನ್ಸ್‌ಟೇಬಲ್ ಅಮಾನತು, ಮಹಿಳಾ ಸಿಬ್ಬಂದಿ ವಿರುದ್ಧ ವಿಚಾರಣೆ ಮಾತ್ರ!

ಒಂದೇ ತಪ್ಪಿಗೆ ಇಬ್ಬರಿಗೆ ಎರಡು ರೀತಿಯ ನ್ಯಾಯವೇ?

ಉತ್ತರ ಪ್ರದೇಶ: ಪೊಲೀಸ್ ಠಾಣೆಯ ಆವರಣದಲ್ಲೇ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕ್ರಮ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೊಳಗೆ ಮಹಿಳಾ ಮತ್ತು ಪುರುಷ ಕಾನ್ಸ್‌ಟೇಬಲ್ ಪರಸ್ಪರ ಚುಂಬಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಪುರುಷ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಲಾಗಿದ್ದು, ಮಹಿಳಾ ಕಾನ್ಸ್‌ಟೇಬಲ್ ವಿರುದ್ಧ ಇಲಾಖಾ ವಿಚಾರಣೆ ಮಾತ್ರ ಆರಂಭಿಸಲಾಗಿದೆ ಎನ್ನಲಾಗಿದೆ.
ಒಂದೇ ತಪ್ಪಿಗೆ ಇಬ್ಬರಿಗೆ ಎರಡು ರೀತಿಯ ನ್ಯಾಯವೇ?
ಒಂದೇ ಪ್ರಕರಣದಲ್ಲಿ ಇಬ್ಬರು ಸಿಬ್ಬಂದಿಗೆ ವಿಭಿನ್ನ ರೀತಿಯ ಕ್ರಮ ಕೈಗೊಂಡಿರುವುದು ತಾರತಮ್ಯದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಬ್ಬರೂ ತಪ್ಪಿತಸ್ಥರಾಗಿದ್ದರೆ ಕ್ರಮದಲ್ಲೂ ಸಮಾನತೆ ಇರಬೇಕಲ್ಲವೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button