ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಕಾರ್ಯಕ್ರಮ:ದುಶ್ಚಟಗಳಿಂದ ದೂರವಿರುವುದು ಅಗತ್ಯ: ಡಾ. ಜಿ.ಎಸ್. ಪಲ್ಲೇದ
ಹದಿಹರೆಯದಲ್ಲಿ ಎದುರಾಗುವಮಾನಸಿಕ ಒತ್ತಡ, ಸ್ನೇ ಹಿತರ ಒತ್ತಡ, ಬದಲಾಗುತ್ತಿರುವ ಜೀ ವನಶೈ ಲಿ,ಮಾಧ್ಯಮಗಳ ಪ್ರಭಾವ, ಕುಟುಂಬದಲ್ಲಿ ಪ್ರೀತಿಯ ಕೊರತೆ, ಅನಾರೋಗ್ಯದಂತಹ ಕಾರಣಗಳು ವಿದ್ಯಾರ್ಥಿಗಳನ್ನು ವ್ಯಸನಗಳತ್ತ ಸೆಳೆಯುವ ಸಾಧ್ಯತೆಯಿದೆ.

ಸ್ನೇಹಜೀವಿ ನ್ಯೂಸ್
ಗದಗ : ಮೂರ್ಛರೋಗದ ಸಮಾಜದಲ್ಲಿರುವ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಈ ಕಾಯಿಲೆಗೆ ತಾತ್ಕಾರ ಮಾಡದೆ ಸೂಕ್ತ ಆರೈಕೆ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆದರೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ, ಸಾಮಾನ್ಯರಂತೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ಜಿ.ಎಸ್. ಪಲ್ಲೇದ ಹೇಳಿದರು.
ಗದಗ ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಕಾರ್ಯಕ್ರಮಪಸ್ಸು ಮಾತನಾಡಿದರು. ಹದಿಹರೆಯದಲ್ಲಿ ಎದುರಾಗುವಮಾನಸಿಕ ಒತ್ತಡ, ಸ್ನೇ ಹಿತರ ಒತ್ತಡ, ಬದಲಾಗುತ್ತಿರುವ ಜೀ ವನಶೈ ಲಿ,ಮಾಧ್ಯಮಗಳ ಪ್ರಭಾವ, ಕುಟುಂಬದಲ್ಲಿ ಪ್ರೀತಿಯ ಕೊರತೆ, ಅನಾರೋಗ್ಯದಂತಹ ಕಾರಣಗಳು ವಿದ್ಯಾರ್ಥಿಗಳನ್ನು ವ್ಯಸನಗಳತ್ತ ಸೆಳೆಯುವ ಸಾಧ್ಯತೆಯಿದೆ.ಇಂತಹ ಸಂ ದರ್ಭದಲ್ಲಿ ಆತ್ಮಸ್ಥೈರ್ಯದಿಂದ ದೃಢ ನಿರ್ಧಾರ ಕೈಗೊಂಡು ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.ನರಕೋಶಗಳಲ್ಲಿ ಉಂಟಾಗುವ ಅಧಿಕ ವಿದ್ಯುತ್ ಪ್ರಚೋದನೆಯಿಂದ ಮೆದುಳಿನ ಉದ್ಘಾಟಿಸಿ ಮೆದುಳಿನ ಕಾರ್ಯಕ್ಕೆ ತಾತ್ಕಾಲಿಕ ಅಡಚಣೆಯಾಗಿ ಸೆಳೆತ ಉಂಟಾಗುತ್ತದೆ.ಸರಿಯಾದ ನಿದ್ರೆ,ಒತ್ತಡ ದುಶ್ಚಟಗಳಿಂದ ದೂರವಿರುವುದು ಅಗತ್ಯ ಡಾ. ಜಿ.ಎಸ್. ಪಲ್ಲೇದ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಚ್ ಪಿಐಎಂಎಸ್ ವೈದ್ಯಕೀಯ ಅಧೀಕ್ಷಕ ಡಾ. ವಿನಾಯಕ ಪಂಚಗಾರ – ಜಾಗೃತಿ ಕರಪತ್ರಗಳನ್ನು ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ರಮೇಶ ಮಾಯಪ್ಪನವರ ಹಾಗೂ ಡಾ. ಅವಿನಾಶ ರೋಗದ ಕಾರಣ ಮತ್ತು ಚಿಕಿತ್ಸೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಅರುಣಕುಮಾರ ಕರಿಗಾರ,ಡಾ.ಇರ್ಫಾನ್ ಉಪಸ್ಥಿತರಿದ್ದರು. ಡಾ. ಅಶ್ವಿನಿ ಕುರಿ ಸ್ವಾಗತಿಸಿ, ವಂದಿಸಿದರು.ಡಾ. ಪ್ರವೀಣ ಎಸ್ ರೋಣನಿರೂಪಿಸಿದರು.


