ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕೆಆರ್‌ಐಡಿಎಲ್ ಗದಗ ಎಇಇ ಹೈದರಾಬಾದ್‌ನಲ್ಲಿ ಪತ್ತೆ: ಡಿ.ಕೆ ಶಿವಕುಮಾರ್
ಎಇಇ ಫರ್ವೀಜ್ ಅವರ ಲೊಕೇಷನ್ ಹೈದರಾಬಾದ್‌ನಲ್ಲಿ ಟ್ರೇಸ್ ಆಗಿದೆ

ಸ್ನೇಹಜೀವಿ ನ್ಯೂಸ್
ಬೆಂಗಳೂರು: ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್‌ನ ಎಇಇ ಫರ್ವೀಜ್ ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಎಇಇ ಫರ್ವೀಜ್ ಅವರ ಲೊಕೇಷನ್ ಹೈದರಾಬಾದ್‌ನಲ್ಲಿ ಟ್ರೇಸ್ ಆಗಿದೆ. ಸದ್ಯದಲ್ಲೇ ಪೊಲೀಸರು ಅವರನ್ನು ಕರೆತರಲಿದ್ದಾರೆ ಎಂದು ಹೇಳಿದ್ದಾರೆ.
ಫರ್ವೀಜ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರ ವೈಯಕ್ತಿಕ ವಿಚಾರದಲ್ಲಿ ಏನೋ ಸಮಸ್ಯೆ ಇದೆ ಎಂದು ತಮಗೆ ಮಾಹಿತಿ ಬಂದಿದೆ. ಈ ಹಿಂದೆ ಕೂಡ ಅವರು ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಹಿಂದಿನ ಬಾರಿಯೂ ಅಜ್ಮೀರ್‌ನಿಂದ ಪೊಲೀಸರು ಅವರನ್ನು ಪತ್ತೆ ಹಚ್ಚಿ ಕರೆ ತಂದಿದ್ದರು ಎಂದು ತಿಳಿಸಿದ್ದಾರೆ.
