ಉತ್ತರ ಕರ್ನಾಟಕದ ಖ್ಯಾತ ಮನೋವೈದ್ಯರಾದ ಡಾ.ಆನಂದ ಪಾಂಡುರಂಗಿ ಅವರ ಅಕಾಲಿಕ ನಿಧನ

ಮೃತರ ಆತ್ಮಕ್ಕೆ ಚೀರಶಾಂತಿ ದೊರಕಲಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸುವೆ .

              ಪಾಂಡುರಂಗಿ ಅವರ ಅಗಲಿಕೆಯ ಸುದ್ದಿ ತೀವ್ರ ದುಃಖ ತಂದಿದೆ.
ತಮ್ಮ ಚಿಕಿತ್ಸೆ ಮಾತ್ರವಲ್ಲದೆ, ಕರುಣಾಮಯಿ ನುಡಿಗಳಿಂದಲೇ ಲಕ್ಷಾಂತರ ಮಾನಸಿಕವಾಗಿ ಕುಗ್ಗಿದ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸಿ, ಅವರು ನವ ಉಲ್ಲಾಸದ ಜೀವನ ನಡೆಸುವಂತೆ ಮಾಡಿದ ಮಹಾನ್ ಸಮಾಜಮುಖಿ ಚೇತನವಿದು. ಉತ್ತರ ಕರ್ನಾಟಕದ ಜನತೆಯೊಂದಿಗೆ ಅವರಿಗಿದ್ದ ಬಾಂಧವ್ಯ ಎಂದಿಗೂ ಮರೆಯಲಾಗದು.

ಉತ್ತರ ಕರ್ನಾಟಕದ ಖ್ಯಾತ ಮನೋವೈದ್ಯರಾದ ಡಾ.ಆನಂದ ಪಾಂಡುರಂಗಿ ಅವರ ಅಕಾಲಿಕ ನಿಧನ ವಾರ್ತೆ ತಿಳಿದು ಮನಸ್ಸಿಗೆ ಅತೀವ ನೋವು ಉಂಟಾಗಿದೆ.ನನ್ನ ಸಾರ್ವಜನಿಕ ಬದುಕಿನ ಆರಂಭ ದಿನಗಳಿಂದಲೂ ಜೊತೆಗಿದ್ದ ಶ್ರೀಯುತರು ವೇಮನ ವಿದ್ಯವರ್ಧಕ ಸಂಘ ಹಾಗೂ ಧಾರವಾಡದ ಸಪ್ತಾಪುರದಲ್ಲಿರುವ ಶಾರದಾ ಬಾಲಕಿಯರ ಪದವೀಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿ ಅಗಣಿತ ಸೇವೆ ನೀಡಿದ್ದಾರೆ ಹಾಗೂ ಧಾರವಾಡದ ಸಂಪರ್ಕ ಕೊಂಡಿಯಂತಿದ್ದ ಅವರ ನಿಧನ ಉತ್ತರ ಕರ್ನಾಟಕಕ್ಕೆ ತುಂಬಲಾರದ ನಷ್ಟ ಮೃತರ ಆತ್ಮಕ್ಕೆ ಚೀರಶಾಂತಿ ದೊರಕಲಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಪ್ರಾರ್ಥಿಸುವೆ .

                                     ಎ ಎನ್‌ ಶಾಲಗಾರ .ಸಂಪಾದಕ ಸ್ನೇಹಜೀವಿ ನ್ಯೂಸ್

Related Articles

Leave a Reply

Your email address will not be published. Required fields are marked *

Back to top button