ಕೈದಿಗಳ ಜೂಜಾಟದ ವಿಡಿಯೋ ವೈರಲ್
ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಿಲ್ಲವೇ ? ಎಂಬ ಪ್ರಶ್ನೆ ಎದುರಾಗಿದೆ.

ಕಲಬುರಗಿ,ಡಿ.31: ಕೇಂದ್ರ ಕಾರಾಗೃಹದÀಲ್ಲಿ ಕೈದಿಗಳ ಹೈಫೈ ಜೀವನದ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಬ್ರ್ಯಾಂಡೆಡ್ ಮದ್ಯ ಸೇವಿಸುತ್ತ, ಸಿಗರೇಟ್ ಸೇದುತ್ತಾ ಗುಂಪು ಗುಂಪಾಗಿ ಜೂಜಾಟ ಆಡುತ್ತಿರುವ, ಕ್ಲಬ್‍ಗಳನ್ನೆ ಮೀರಿಸೋ ಬಿಂದಾಸ್ ಲೈಫ್‍ನ ವಿಡಿಯೋ ಇದಾಗಿದೆ.ಬಿಗಿ ಭದ್ರತೆ ಇರುವ ಜೈಲಿನಲ್ಲಿ ನಿಷೇಧಿತ ವಸ್ತುಗಳು ಹೇಗೆ ಸರಬರಾಜು ಆಗುತ್ತಿವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಿಲ್ಲವೇ ? ಎಂಬ ಪ್ರಶ್ನೆ ಎದುರಾಗಿದೆ.
ಜೈಲ್ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡಿದ್ದ ಪಿಎಸೈ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ವಿಡಿಯೋ ನಿನ್ನೆಯಷ್ಟೇ ವೈರಲ್ ಆಗಿತ್ತು.
ಇಂದು ಜೈಲಿನಲ್ಲಿ ಕೈದಿಗಳ ಜೂಜಾಟದ ವಿಡಿಯೋ ವೈರಲ್ ಆಗಿದೆ .
