ಲಂಚ ಪಡೆದ ನೌಕರನಿಗೆ 4 ವರ್ಷ ಶಿಕ್ಷೆ

ಲೋಕಾಯುಕ್ತ ಡಿಎಸ್‍ಪಿ ವಿರೇಶ ಕರಡಿಗುಡ್ಡ ಅವರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು.

ಸ್ನೇಹಜೀವಿ ನ್ಯೂಸ್

ಕಲಬುರಗಿ,ಜ.24-ಹಾಸ್ಟೆಲ್ ವಾರ್ಡನ್ ಅವರಿಂದ 4 ತಿಂಗಳ ಸಂಬಂಳದ ಬಿಲ್ ಮಂಜೂರು ಮಾಡಲು 2 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಸೇಡಂ ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ಸೂಪರ್ ವೈಸರ್ ಯಮನಪ್ಪ ಕಡಿಯಪ್ಪ ತಳವಾರಗೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ 4 ವರ್ಷಗಳ ಶಿಕ್ಷೆ ಹಾಗೂ 20 ಸಾವಿರ ರೂ.ದಂಡ ವಿಧಿಸಿದೆ.
   ಲೋಕಾಯುಕ್ತ ಡಿಎಸ್‍ಪಿ ವಿರೇಶ ಕರಡಿಗುಡ್ಡ ಅವರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ಇನ್ಸಪೆಕ್ಟರ್ ಕೆ.ಎಸ್.ಕಲ್ಲದೇವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್.¯ಕ್ಷ್ಮೀನಾರಾಯಾಣ ಅವರು ಉಭಯ ಪಕ್ಷಗಳ ವಾದವಿವಾದ ಆಲಿಸಿ ಆರೋಪಿ ಯಮನಪ್ಪನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್.ಚಾಂದಕವಟೆ ವಾದ ಮಂಡಿಸಿದ್ದರು

Leave a Reply

Your email address will not be published. Required fields are marked *

Back to top button