ಮಂಜುನಾಥ್ ಮೇಲಿನ ಇ.ಡಿ ದಾಳಿಗೆ ಕಾರಣ ಸ್ವತಃ ಅರ್ಥೆಸಿಕೊಳ್ಳಲು ಸಾಧ್ಯವಾಗಿಲ್ಲ: ಸತೀಶ್ ಜಾರಕಿಹೊಳಿ ಬೇಸರ

ಕರ್ನಾಟಕ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಿತ್ತು. ಮಂಜುನಾಥ ತಮ್ಮ ಮೇಲಿನ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ'

ಸ್ನೇಹಜೀವಿ ನ್ಯೂಸ್
ಬೆಳಗಾವಿ, ಜೂ.೨೬: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ನನ್ನ ಬಾವ, ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದ್ದಕ್ಕೆ ಕಾರಣ ಏನೆಂದು ಇನ್ನೂ ನನಗೆ ಅರ್ಥವಾಗುತ್ತಿಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಮಂಜುನಾಥ ರಾಜ್ಯ ಸರ್ಕಾರಿ ಉದ್ಯೋಗಿಯಾಗಿದ್ದರು. ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸಲು ಲೋಕಾಯುಕ ್ತವಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಜುನಾಥ ಮೇಲಿನ ಇ.ಡಿ ದಾಳಿಗೆ ಕಾರಣಗಳನ್ನು ಸ ್ವತಃ ಅರ್ಥೆÊಸಿಕೊಳ ್ಳಲು ಸಾಧ್ಯವಾಗಿಲ್ಲ. ಮಂಜುನಾಥ ತನಿಖೆಗಳನ್ನು ಎದುರಿಸಬೇಕಾಗುತ್ತದೆ.
ಆರೋಪಗಳನ್ನು ಕಾನೂನುಬದ್ಧವಾಗಿ ಎದುರಿಸಬೇಕಾಗುತ ್ತದೆ. ¨s À ್ರಷ್ಟಾಚಾರದ ಆರೋಪಗಳಿಗೆ ಸಂಬAಧಿಸಿ ಲೋಕಾಯುಕ ್ತರು ಈ ಹಿಂದೆ ಮಂಜುನಾಥ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಆದರೆ, ಕರ್ನಾಟಕ ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಿತ್ತು. ಮಂಜುನಾಥ ತಮ್ಮ ಮೇಲಿನ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಾಗಿದೆ’ ಎಂದರು.
ರಾಜ್ಯ ಸರ್ಕಾರಕ್ಕೆ ಸಂಬAಧಿಸಿದ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರಿ ಉದ್ಯೋಗಿ ಮೇಲೆ ಇ.ಡಿ ಇಷ್ಟು ದೊಡ್ಡ ಮಟ್ಟದಲ್ಲಿ ದಾಳಿ ಮಾಡಿರುವುದು ಇದೇ ಮೊದಲು. ಇದು ರಾಜಕೀಯ ಪ್ರೇರಿತ ಎಂದು ಈಗಲೇ ಹೇಳಲಾಗದು. ಜಾರಕಿಹೊಳಿ ಕುಟುಂಬದ ಮೇಲೆ ದಾಳಿ ನಡೆಸಲಾಗಿದೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂದು ಕೆಲವೇ ತಿಂಗಳಲ್ಲಿ ತಿಳಿಯುತ ್ತದೆ. ೨೦೨೮ ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ, ಇಂಥ ದಾಳಿಗಳು ಆರಂ¨s Àವಾಗುವುದು ಸಹಜ. ಹೆಚ್ಚಿನ ಕಾಂಗ್ರೆಸ್ ನಾಯಕರು ತಮ್ಮ ಮೇಲೆ ಮತ್ತು ಸಂಬAಧಿಕರ ಮೇಲೆ ಇ.ಡಿ ದಾಳಿ ನಡೆಸುವ ಭಯದಲ್ಲಿದ್ದಾರೆ ಎಂದು ಹೇಳಿದರು.
ಮಂಜುನಾಥ ಅವರ ಕುಟುಂಬ ಕಳೆದ ೩೦ ವರ್ಷಗಳಿಂದ ಮೈಸೂರಿನಲ್ಲಿ ಬಾರ್ ಮತ್ತು ಇತರೆ ವ್ಯವಹಾರಗಳನ್ನು ಹೊಂದಿದೆ. ಸರ್ಕಾರಿ ಅಧಿಕಾರಿಯಾಗಿ ಅವರು ತಮ್ಮ ಹೆಸರಿನಲ್ಲಿ ಮದ್ಯದ ಬಾರ್ ಪರವಾನಗಿ ಹೊಂದಲು ಸಾಧ್ಯವಿಲ್ಲ. ಅವು ಕುಟುಂಬ ಸದಸ್ಯರ ಹೆಸರಿನಲ್ಲಿ ಇರಬಹುದು ಎಂದು ಅವರು ಹೇಳಿದರು. ಉಪುö್ಪ ತಿಂದವರು ನೀರು ಕುಡಿಯಬೇಕಾಗುತ್ತದೆ’
ಎಂಬ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಹೇಳಿಕೆ ಕುರಿತಾದ ಪ್ರಶ್ನೆಗೆ, ತಪುö್ಪ ಮಾಡಿದವರು ಶಿಕ್ಷೆ ಎದುರಿಸಬೇಕಾಗುತ್ತದೆ. ಭ ್ರಷ್ಟಾಚಾರ ಒಂದು ಇಲಾಖೆ ಅಥವಾ ವ್ಯಕ್ತಿಗೆ ಸೀಮಿತವಾಗಿಲ್ಲ. ಮಂಜುನಾಥ ಅವರ ಮೇಲೆ ಇ.ಡಿ ದಾಳಿ ನಡೆದ ಕಾರಣಕ್ಕೆ, ಅವರ ಹೆಸರು ಮುನ್ನೆಲೆಗೆ ಬಂದಿದೆ’ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button