ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಉರುಳುಸೇವೆ

ಗದಗ್ ಜೂ.೯: ರೋಣ ಶಾಸಕ ಜಿಎಸ್ ಪಾಟೀಲ್ ಅವರಿಗೆ ಸಚಿವ ಸ್ಥಾನನೀಡಬೇಕೆಂದುಆಗ್ರಹಿಸಿ ಗದಗ್ ನಗರದ ಭೂಮ ರೆಡ್ಡಿ ವೃತ್ತದಿಂದ ಪುಟ್ಟರಾಜ ಗವಾಯಿ ವೃತ್ತದವರೆಗೆ ಸಹಸ್ರಾರು ಮಂದಿ ಬೃಹತ್ ಜಾಥಾ ನಡೆಸಿದ್ದಲ್ಲದೇ, ಉರುಳು ಸೇವೆ ನಡೆಸಿದರು.
  ಜಿಎಸ್ ಪಾಟೀಲ್ ಅವರನ್ನು ಮಂತ್ರಿಮAಡಲಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ರೋಣದಿಂದ ಸಾವಿರಾರು ಜಿಎಸ್ ಪಾಟೀಲರ ಅಭಿಮಾನಿಗಳು ಗದಗ್ ನಗರಕ್ಕೆ ಆಗಮಿಸಿ, ಮಂತ್ರಿಸ್ಥಾನ ನೀಡುವಂತೆ ಪ್ರತಿಭಟನೆ ನಡೆಸಿದರು.
ಭೂಮರೆಡ್ಡಿ ವೃತ್ತದಿಂದ ಉರುಳು ಸೇವೆ ಸೇರಿದಂತೆ ಅನೇಕ ಪ್ರತಿಭಟನೆಗಳನ್ನು ವ್ಯಕ್ತಪಡಿಸಿದ್ದಾರೆ. ರೋಣದ ಜನತೆ ಮೆರವಣಿಗೆಯ ಮುಖಾಂತರ ತಮ್ಮ ಶಾಸಕರಿಗೆ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back to top button