ದೇಶದಲ್ಲಿ 10 ಕೋಟಿಗಿಂತಲೂ ಹೆಚ್ಚು ಜನರಿಗೆ ಮಧುಮೇಹ ಕಾಯಿಲೆ: ಡಯಾಬಿಟಿಸ್ ನಿಯಂತ್ರಿಸಲು ಈ ಬದಲಾವಣೆಗಳು ಅಗತ್ಯ

ಭಾರತದಲ್ಲಿ 10 ಕೋಟಿಗಿಂತಲೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕ ಪ್ರೊ. ವೈದ್ಯ ಪ್ರದೀಪ್ ಕುಮಾರ್ ಪ್ರಜಾಪತಿ ಮಧುಮೇಹದ ನಿಯಂತ್ರಿಸುವ ಕುರಿತು ಪ್ರಮುಖ ಸಲಹೆಯನ್ನು ನೀಡಿದ್ದಾರೆ.

ನವದೆಹಲಿ: ಭಾರತವು ಮಧುಮೇಹದ ಕೇಂದ್ರವಾಗುತ್ತಿದ್ದು, 10 ಕೋಟಿಗಿಂತಲೂ ಹೆಚ್ಚು ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 13.6 ಕೋಟಿ ಜನರು ಮಧುಮೇಹ ಪೂರ್ವ ವರ್ಗಕ್ಕೆ ಸೇರುತ್ತಿದ್ದಾರೆ. ಈ ಕುರಿತು ಆತಂಕ ವ್ಯಕ್ತಪಡಿಸಿದ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕ ಪ್ರೊ. ವೈದ್ಯ ಪ್ರದೀಪ್ ಕುಮಾರ್ ಪ್ರಜಾಪತಿ ಅವರು ಪ್ರತಿಕ್ರಿಯಿಸಿ, ಭಾರತದಲ್ಲಿ ಕ್ಷೀಣಿಸುತ್ತಿರುವ ಆಹಾರ ಪದ್ಧತಿಗಳು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎಂದು ಹೇಳಿದ್ದಾರೆ.

ಬದಲಾಗುತ್ತಿರುವ ಜೀವನಶೈಲಿಯಿಂದ ಮಧುಮೇಹಿಗಳ ಹೆಚ್ಚಳ: ಇಂದಿನ ಕಾಲದಲ್ಲಿ ಮಧುಮೇಹದ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ದೊಡ್ಡ ಕಾರಣ ಎಂದರೆ ದೈನಂದಿನ ಜೀವನದಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಯು ಕಾರಣವಾಗಿದೆ. ಒಂದು ಕಾಲದಲ್ಲಿ 60 ವರ್ಷ ದಾಟಿದ ನಂತರ ಈ ರೋಗ ಸಾಮಾನ್ಯವಾಗಿತ್ತು. ಆದರೆ, ಇಂದು ಬದಲಾಗುತ್ತಿರುವ ಕಾಲದಲ್ಲಿ ಜನರು ಯಾವುದೇ ವಯಸ್ಸಿನಲ್ಲಿ ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಲೋಪತಿ ಚಿಕಿತ್ಸೆಯಲ್ಲಿ ಜನರು ಗಂಭೀರ ಮಧುಮೇಹಕ್ಕೆ ಇನ್ಸುಲಿನ್ ಬಳಸುತ್ತಿದ್ದಾರೆ.

DIABETES PATIENT INCREASING NUMBER AYURVEDA EXPRESS CONCERN OVER SUGAR Healthy lifestyle And diabetes ಡಯಾಬಿಟಿಸ್ ನಿಯಂತ್ರಿಸಲು ಹೇಗೆ
ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕ ಪ್ರೊ. ವೈದ್ಯ ಪ್ರದೀಪ್ ಕುಮಾರ್ ಪ್ರಜಾಪತಿ ಮಾತನಾಡಿದರು.
ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಯಲು ಸಾಧ್ಯ: ಮಧುಮೇಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ನಿರ್ದೇಶಕರು ತಿಳಿಸುವ ಪ್ರಕಾರ, ಮಧುಮೇಹಿಗಳು ಆರೋಗ್ಯಕರ ಆಹಾರ ಕ್ರಮ ಹಾಗೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇವುಗಳನ್ನು ಅಳವಡಿಸಿಕೊಂಡು ಜನರು ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟು ಮಾತ್ರ ಸೇವಿಸಿ: ಪ್ರೊ.ವೈದ್ಯ ಪ್ರದೀಪ್ ಕುಮಾರ್ ಪ್ರಜಾಪತಿ ಅವರು ತಿಳಿಸುವ ಪ್ರಕಾರ, ಮಧುಮೇಹ ರೋಗಿಗಳು ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟು ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ವಾಕಿಂಗ್​ ಮಾಡಲು ಪ್ರಯತ್ನಿಸುವುದು ಅತ್ಯಂತ ಮುಖ್ಯವಾಗಿದೆ. ದೆಹಲಿಯಲ್ಲಿ ಇತ್ತೀಚೆಗೆ ಶೀತ ತೀವ್ರಗೊಂಡಿದ್ದರೂ ಜನರು ನಡೆಯಲು ಕಷ್ಟಪಡುತ್ತಿದ್ದರು. ಈಗ ಶೀತ ಕಡಿಮೆಯಾಗಿದೆ, ಜನರು ಊಟದ ನಂತರ ವಾಕಿಂಗ್​ ಮಾಡಬೇಕಾಗುತ್ತದೆ.

ಊಟದ ಬಳಿಕ ಯಾವಾಗಲೂ 100 ಹೆಜ್ಜೆ ವಾಕಿಂಗ್ ಮುಖ್ಯ: ಬೆಳಗ್ಗೆ ಹಾಗೂ ಸಂಜೆ ವಾಕಿಂಗ್​ ಅವಶ್ಯವಾಗಿದೆ. ಊಟದ ನಂತರ 100 ಹೆಜ್ಜೆ ನಡೆಯುವುದು ಮಧುಮೇಹ ರೋಗಿಗಳಿಗೆ ಅತ್ಯಗತ್ಯವಾಗಿದೆ. ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದರಿಂದ ನಮ್ಮ ದೇಹದಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗುತ್ತವೆ. ದೇಹಕ್ಕೆ ಚಟುವಟಿಕೆ ಬಹಳ ಮುಖ್ಯ. ನಾವು ಜೀರ್ಣಿಸಿಕೊಳ್ಳುವಷ್ಟು ಆಹಾರವನ್ನು ಸೇವಿಸುವುದು ಉತ್ತಮ ಎಂಬ ಪರಿಕಲ್ಪನೆಯನ್ನು ಅನುಸರಿಸುವುದರಿಂದ ಮಧುಮೇಹ ನಿಯಂತ್ರಿಸಲು ಸಾಧ್ಯವಾಗುತ್ತದೆ.

ದೇಶದಲ್ಲಿ ಮಧುಮೇಹಿಗಳ ಸಂಖ್ಯೆ 10.1 ಕೋಟಿ: ಮಧುಮೇಹ ಇಂದು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ICMR-INDIAB ವರದಿಯ ಪ್ರಕಾರ, ದೇಶದಲ್ಲಿ 10.1 ಕೋಟಿಗಿಂತಲೂ ಹೆಚ್ಚು ಜನರು ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ. ಹೆಚ್ಚುವರಿಯಾಗಿ ಸುಮಾರು 13.6 ಕೋಟಿ ಜನರು ಮಧುಮೇಹ ಪೂರ್ವದವರಾಗಿದ್ದು, ಭವಿಷ್ಯದಲ್ಲಿ ಮಧುಮೇಹ ಬರುವ ಅಪಾಯವಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ನಮ್ಮ ದೈನಂದಿನ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ ಹಾಗೂ ನಮ್ಮ ಆಹಾರ ಪದ್ಧತಿಯನ್ನು ನಿಯಂತ್ರಿಸಿದರೆ ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಎಂದು ಆಯುರ್ವೇದ ಸಂಸ್ಥೆ ಸಲಹೆ ನೀಡುತ್ತಿದೆ.

ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Related Articles

Leave a Reply

Your email address will not be published. Required fields are marked *

Back to top button