ಫೆ.12ಕ್ಕೆ ಭಾರತ್​ ಬಂದ್​​: ಶಾಲಾ-ಕಾಲೇಜುಗಳು, ಸಾರಿಗೆ ಕೂಡಾ ಕ್ಲೋಸ್?

ನಾಳೆ ಫೆ 12 ಮುಷ್ಕರಕ್ಕೆ ಕರೆ ನೀಡಲಾಗಿದೆ. ನಾಳೆ ಭಾರತ್ ಬಂದ್ ನಡೆಯಲಿದೆ ಎಂದು ಸಂಘಟನೆಗಳು ಘೋಷಣೆ ಮಾಡಿವೆ. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ರೈತ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಬೆಂಗಳೂರು: ನಾಳೆ ಫೆಬ್ರವರಿ 12 ರಂದು ಭಾರತದಾದ್ಯಂತ ಬಂದ್​ ಮಾಡಲು ಹಲವು ಸಂಘಟನೆಗಳು ಮುಂದಾಗಿದೆ. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಿದ್ದು, ಇದರಂದ ನಾಳೆ ಶಾಲಾ-ಕಾಲೇಜುಗಳು ಮತ್ತು ಸಾರಿಗೆಗೆ ತೊಂದರೆ ಆಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.        ಭಾರತದಾದ್ಯಂತ ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಭಾರತ-ಯುಎಸ್ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಭಟಿಸಿ ಈ ಬಂದ್ ನಡೆಯುತ್ತಿದ್ದು, ಇದರಿಂದ ಏನೆಲ್ಲಾ ಪರಿಣಾಮಗಳು ಆಗಲಿದೆ. ಶಾಲಾ-ಕಾಲೇಜುಗಳು, ಸಾರಿಗೆ ಬಂದ್​ ಆಗುತ್ತಾ?
ನಾಳೆ ನಡೆಯುವ ಭಾರತ್​ ಬಂದ್​​ನಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು, ಸರ್ಕಾರಿ ಕಚೇರಿಗಳು, ಸಾರಿಗೆ ಸೇವೆಗಳು, ಮಾರುಕಟ್ಟೆಗಳು ಮತ್ತು ಕೆಲವು ಶಾಲಾ-ಕಾಲೇಜುಗಳು ಪರಿಣಾಮ ಬೀರಬಹುದು. ಸ್ಥಳೀಯ ಪರಿಸ್ಥಿತಿಗಳನ್ನು ಅವಲಂಬಿಸಿ ಅಡಚಣೆಗಳು ಹೆಚ್ಚು-ಕಡಿಮೆಯಾಗಬಹುದು. ತುರ್ತು ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.
ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳು!: ಇದು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯಿಂದ ನಡೆಯುತ್ತಿದೆ. INTUC, AITUC, HMS, CITU, AIUTUC, TUCC, SEWA, AICCTU, LPF ಮತ್ತು UTUC ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿವೆ. ರೈತ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಅಖಿಲ ಭಾರತ ಕಿಸಾನ್ ಸಭಾ (AIKS) ಸಂಪೂರ್ಣ ಬೆಂಬಲ ನೀಡಿವೆ. ಈ ಜಂಟಿ ಕ್ರಿಯೆಯಿಂದ ಮುಷ್ಕರಕ್ಕೆ ಬಲ ಬಂದಿದೆ. ಇದರಿಂದ ನಾಳೆ ಶಾಲಾ-ಕಾಲೇಜುಗಳು ಮತ್ತು ಸಾರಿಗೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button