ಬಳ್ಳಾರಿ ನಗರ ಡಿವೈಎಸ್ಪಿ ಸ್ಥಾನಕ್ಕೆ ಬಂದಿದ್ದ ಯಶ್ ಕುಮಾರ್ ಶರ್ಮ ವಾಪಸ್
ಐಪಿಎಸ್ ಅಧಿಕಾರಿ ಬಂದ್ರು ಅಧಿಕಾರ ಹಸ್ತಾಂತರ ಮಾಡದೇ, ಇಲ್ಲಿಯೇ ಉಳಿದುಕೊಳ್ಳುವಷ್ಟು ಪ್ರಭಾವಿ ಆಗಿದ್ದಾರೆ ನಂದರೆಡ್ಡಿ ಎನ್ನುವಂತಾಗಿದೆ.

ಸ್ನೇಹಜೀವಿ ನ್ಯೂಸ್
ಬಳ್ಳಾರಿ:ಜ,29- ನಗರ ಡಿವೈಎಸ್ಪಿ ಯಾಗಿ ನಿಯೋಜಿತಗೊಂಡು ನಗರಕ್ಕೆ ನಿನ್ನೆ ನಗರಕ್ಕೆ ಆಗಮಿಸಿ, ಡಿವೈಎಸ್ಪಿ ಕಚೇರಿಯಲ್ಲಿ ಕುಳಿತು, ಅಧಿಕಾರ ಸ್ವೀಕರಿಸಲು ಆಗದೇ ಐಪಿಎಸ್ ಅಧಿಕಾರಿ ಯಶ್ ಕುಮಾರ್ ಶರ್ಮ ವಾಪಸ್ ಹೋಗಿದ್ದಾರಂತೆ.
ಈವರಗೆ ನಗರ ಡಿವೈಎಸ್ಪಿಯಾಗಿದ್ದ. ಚಂದ್ರಕಾಂತ್ ನಂದಾರೆಡ್ಡಿ ಅವರಿಗೆ ಸ್ಥಳ ತೋರಿಸದೆ. ಅವರ ಜಾಗಕ್ಕೆ ಯಶ್ ಕುಮಾರ್ ಶರ್ಮ ಅವರನ್ನು ಮೊನ್ನೆ ನಿಯೋಜನೆ ಮಾಡಿ ಆದೇಶ ಹೊರಡಿಸಿತ್ತು.
ಬಳ್ಳಾರಿ ಬ್ಯಾನರ್ ಗಲಾಟೆಯನ್ನು ನಿಭಾಯಿಸಲು ನಂದಾರೆಡ್ಡಿ ವಿಫಲವಾಗಿದ್ದಾರೆಂದು ಬಿಜೆಪಿಯ ಮುಖಂಡರು ಆರೋಪ ಮಾಡಿದ್ದಲ್ಲದೆ, ಅವರ ವರ್ಗಾವಣೆ ಮಾಡಲು ಆಗ್ರಹಿಸಿದ್ದರು.
ಈ ಹಿನ್ನಲೆಯಲ್ಲಿ ನಂದರೆಡ್ಡಿ ಅವರ ವರ್ಗಾವಣೆ ಮಹತ್ವ ಪಡೆದುಕೊಂಡಿತ್ತು. ಆದರೆ ಅವರು ನಿಯೋಜಿತಗೊಂಡು ಬಂದಿದ್ದ ಶರ್ಮ ಅವರಿಗೆ ಭೌತಿಕವಾಗಿ ಅಧಿಕಾರ ಹಸ್ತಾಂತರ ಮಾಡಿರಲಿಲ್ಲ.ತಿಪಟೂರು ಉಪವಿಭಾಗದ ಪ್ರೋಬೆಷನರಿ ಡಿವೈಎಸ್ಪಿ ಯಾಗಿದ್ದ ಯಶಕುಮಾರ ಶರ್ಮ ಅವರು ನಿನ್ನೆ ಅಧಿಕಾರ ಸ್ವೀಕಾರ ಮಾಡಲು ಬಂದು ಅವರು ಇಡೀ ದಿನ ಓಡಾಡಿದ್ರು ಸ್ವೀಕಾರ ಮಾಡಲಾಗಿಲ್ಲವಂತೆ. ಇದೇ ವೇಳೆ ಸರ್ಕಾರ ಹಿಂದಕ್ಕೆ ಬನ್ನಿ ಎಂದು ಶರ್ಮ ಅವರನ್ನು ಕರೆಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಬ್ಯಾನರ್ ಗಲಾಟೆ ಹಿನ್ನಲೆಯಲ್ಲಿ ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿರೋ ಕಾರಣ ಶರ್ಮ ಅವರು ಹಿಂತಿರುಗುವಂತೆ ಆಗಿದೆ ಎನ್ನಲಾಗುತ್ತಿದೆ.ಐಪಿಎಸ್ ಅಧಿಕಾರಿ ಬಂದ್ರು ಅಧಿಕಾರ ಹಸ್ತಾಂತರ ಮಾಡದೇ, ಇಲ್ಲಿಯೇ ಉಳಿದುಕೊಳ್ಳುವಷ್ಟು ಪ್ರಭಾವಿ ಆಗಿದ್ದಾರೆ ನಂದರೆಡ್ಡಿ ಎನ್ನುವಂತಾಗಿದೆ.

