ಸತತ ಪರಿಶ್ರಮದಿಂದ ನಿಮ್ಮ ನಾಳೆಗಳನ್ನು ಉತ್ತಮವಾಗಿಸಿಕೊಳ್ಳಿ ಎಂದು ಚರ್ಮರೋಗ ತಜ್ಞ ಡಾ. ಸಲೀಂ ಜಮಾದಾರ ಕರೆ
ಗದಗ: ಸನ್ಮಾರ್ಗ ಕಾಲೇಜಿನಲ್ಲಿ ಅಭ್ಯುದಯ, ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
ಸ್ನೇಹಜೀವಿ ನ್ಯೂಸ್
ಗದಗ: ವಿದ್ಯಾರ್ಥಿಗಳು ಶೈಕ್ಷಣಿಕ ವೇದಿಕೆಯಲ್ಲಿ ಪಡೆಯುವ ಬೌದ್ಧಿಕತೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಪಿ.ಯು.ಸಿ. ಎರಡು ವರ್ಷಗಳ ಅವಧಿ ಭವಿಷ್ಯದ ದಿಕ್ಕೂಚಿಯಾಗಿದ್ದು, ಸತತ ಪರಿಶ್ರಮದಿಂದ ನಿಮ್ಮ ನಾಳೆಗಳನ್ನು ಉತ್ತಮವಾಗಿಸಿಕೊಳ್ಳಿ ಎಂದು ಚರ್ಮರೋಗ ತಜ್ಞ ಡಾ. ಸಲೀಂ ಜಮಾದಾರ ಕರೆ ನೀಡಿದರು.
ಗದಗ ನಗರದ ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಅಭ್ಯುದಯ ಮತ್ತು ವಿದ್ಯಾಲಯದ ಸಂಸತ್ತು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಂಸ್ಥೆಯ ಚೇರಮನ್ ರಾಜೇಶ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಸಂಸ್ಥೆ ಸದಾ ಸಿದ್ಧವಿದ್ದು, ಉತ್ತಮ ವರ್ತನ ಮತ್ತು ವಿದ್ಯಾರ್ಥಿಗಳಿಂದ .ಪರಿಶ್ರಮವನ್ನು ನಿರೀಕ್ಷಿಸುತ್ತದೆ ಎಂದರು ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದ ಒಡೆಯರ್,ವಿದ್ಯಾರ್ಥಿಗಳಲ್ಲಿರುವ ಬೌದ್ಧಿಕ ಸಾಮರ್ಥ್ಯವನ್ನು ಜಾಗೃತಗೊಳಿಸಿ ಸಮಾಜಕ್ಕೆ ಕೊಡುಗೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪುನೀತ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಧನದಾಹಕ್ಕೆ ಬೀಳದೆ, ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಶ್ರದ್ಧೆ ಹಾಗೂ ಆತ್ಮವಿಶ್ವಾಸವಿದ್ದರೆ ಸಾಧನೆಯ ಶಿಖರ ತಲುಪಬಹುದು ಎ೦ದರು. ವೇದಿಕೆಯಲ್ಲಿ ನಿರ್ದೇಶಕರಾದ
ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ಸೈಯದ್ ಮತೀನ ಮುಲ್ಲಾ ಹಾಗೂ ರಾಹುಲ್ ಒಡೆಯರ್ಉಪಸ್ಥಿತರಿದ್ದರು. ನಮ್ರತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಮುರಲೀಧರ ಸಂಕನೂರ ಸ್ವಾಗತಿಸಿದರು. ಪರಶುರಾಮ ಕೋಟಿಕಲ್ ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರಘುವೀರ ಕಲಬುರ್ಗಿ ವಂದಿಸಿದರು.ನಿರೂಪಿಸಿದರು. ಎಂ. ಸಿ. ಹಿರೇಮಠ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗದಗ: ವಿದ್ಯಾರ್ಥಿಗಳು ಶೈಕ್ಷಣಿಕ ವೇದಿಕೆಯಲ್ಲಿ ಪಡೆಯುವ ಬೌದ್ಧಿಕತೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಪಿ.ಯು.ಸಿ. ಎರಡು ವರ್ಷಗಳ ಅವಧಿ ಭವಿಷ್ಯದ ದಿಕ್ಕೂಚಿಯಾಗಿದ್ದು, ಸತತ ಪರಿಶ್ರಮದಿಂದ ನಿಮ್ಮ ನಾಳೆಗಳನ್ನು ಉತ್ತಮವಾಗಿಸಿಕೊಳ್ಳಿ ಎಂದು ಚರ್ಮರೋಗ ತಜ್ಞ ಡಾ. ಸಲೀಂ ಜಮಾದಾರ ಕರೆ ನೀಡಿದರು.